ಅವನು ತಪ್ಪಿಲ್ಲದಿದ್ದರೂ ಹೊಡೆಯುತ್ತಾನೆ,
ತನ್ನ ಮನಸಿನಲ್ಲಿ ಅನುಮಾನ ಬಿತ್ತಿಕೊಳ್ಳುತ್ತಾನೆ
ನನ್ನ ಪಶುಪಾಲಕ ಯಜಮಾನ ಹೊಡೆಯುತ್ತಾನೆ,
ತಪ್ಪಿಲ್ಲದಿದ್ದರೂ
ಇದು ಜಾನಪದ ಗೀತೆಯ ಸಾಲೆಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಗುಜರಾತಿನ ಕಛ್ಚ್ ಪ್ರಾಂತ್ಯದ ಗಡಿಯಲ್ಲಿ ಈವಿಷಯಗಳು ತೀರಾ ಸಾಮಾನ್ಯ. ಈ ಹಾಡು ಪ್ರಸ್ತುತಪಡಿಸುವ ಘೋರ ವಾಸ್ತವ ಇನ್ನಷ್ಟು ಆತಂಕಕಾರಿಯಾಗಿದೆ.
ಹೆಂಡತಿಯನ್ನು ಹೊಡೆಯುವುದು ಸೇರಿದಂತೆ, ತನ್ನ ಸಂಗಾತಿಯ ಮೇಲೆ ಹಿಂಸೆ ಎಸಗುವುದು ಒಂದು ಜಾಗತಿಕ ಸಮಸ್ಯೆ. ಇದು ಮಹಿಳೆಯರ ಮಾನವ ಹಕ್ಕುಗಳ ಉಲ್ಲಂಘನೆಯ ದೃಷ್ಟಿಯಿಂದ ಮತ್ತು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿಯೂ ಜಾಗತಿಕ ವಿದ್ಯಮಾನ. ವಿಶ್ವಸಂಸ್ಥೆಯ ಮಹಿಳೆಯರ ವಿರುದ್ಧದ ಹಿಂಸಾಚಾರದ ಜಾಗತಿಕ ಅಂಕಿ-ಅಂಶಗಳ ಪ್ರಕಾರ ಪ್ರತಿ ಮೂವರು ಮಹಿಳೆಯರಲ್ಲಿ ಒಬ್ಬರು ಸಂಗಾತಿಯಿಂದ ಕೆಲವು ರೀತಿಯ ದೈಹಿಕ ಮತ್ತು ಲೈಂಗಿಕ ಹಿಂಸೆಗೆ ಒಳಗಾಗುತ್ತಾರೆ.
ಹಾಗಿದ್ದರೆ ಗಂಡ ಹೆಂಡತಿಗೆ ಹೊಡೆಯುವುದು ಸಮರ್ಥನೀಯವೇ?
ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ 2019-21 ( ಎನ್ಎಫ್ಎಚ್ಎಸ್ 5 ) ಪ್ರಕಾರ ಗುಜರಾತ್ ರಾಜ್ಯದಲ್ಲಿಶೇಕಡಾ 30ಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಶೇಕಡಾ 28ರಷ್ಟು ಪುರುಷರು ಈ ಪ್ರಶ್ನೆಗೆ ಹೌದು ಎಂದು ಉತ್ತರಿಸಿದ್ದಾರೆ. ಹಾಗಿದ್ದರೆ ಗಂಡ ಯಾವೆಲ್ಲ ಕಾರಣಗಳಿಗೆ ಹೆಂಡತಿಗೆ ಹೊಡೆಯಬಹುದು? ವಿಶ್ವಾಸ ದ್ರೋಹದ ಅನುಮಾನ, ಲೈಂಗಿಕ ಕ್ರಿಯೆಗೆ ನಿರಾಕರಿಸುವುದು, ಗಂಡನಿಗೆ ಹೇಳದೆ ಹೊರಗೆ ಹೋಗುವುದು, ಮನೆಯನ್ನು ನಿರ್ಲಕ್ಷಿಸುವುದು, ಒಳ್ಳೆಯ ಅಡುಗೆ ಮಾಡದಿರುವುದು ಇವುಗಳನ್ನು ಅವರು ಕಾರಣವಾಗಿ ನೀಡುತ್ತಾರೆ.
ಸಂಖ್ಯಾಶಾಸ್ತ್ರೀಯ ರಾಷ್ಟ್ರೀಯ ಸಮೀಕ್ಷೆಯಂತೆಯೇ, ಆದರೆ ಅದಕ್ಕಿಂತಲೂ ಹೆಚ್ಚು ಹೆಚ್ಚು ಆಕರ್ಷಕ ರೀತಿಯಲ್ಲಿ, ಜಾನಪದ ಹಾಡುಗಳು ಆಗಾಗ್ಗೆ ಮಾನಸಿಕ ಸಮೀಕ್ಷೆಯನ್ನು ನಮ್ಮೆದುರು ತೆರೆದಿಡುತ್ತವೆ. ಇವು ಮಹಿಳೆಯರ ಆಂತರಿಕ ಜಗತ್ತಿನ ಭಾವನೆಗಳನ್ನು ಮತ್ತು ಅವರ ಸಾಮುದಾಯಿಕ ಕಾರ್ಯಚಟುವಟಿಕೆಗಳನ್ನು ಪ್ರತಿಬಿಂಬಿಸುತ್ತವೆ.
ಈ ಹಾಡುಗಳನ್ನು ನೀವು ಶೋಷಿತರ ಸಂಪನ್ಮೂಲವೆಂದು ಒಪ್ಪಬಹುದು ಅಥವಾ ಒಪ್ಪದಿರಬಹುದು. ಉದಾಹರಣೆಗೆ ಪ್ರಸ್ತುತ ಈ ಹಾಡಿನಲ್ಲಿ ಅವಳ ಸೂಕ್ಷ್ಮ ವಿಮರ್ಶೆಯನ್ನು ಪ್ರಣಯ ಮಾಧುರ್ಯದೊಳಗೆ ಬುದ್ಧಿವಂತಿಕೆಯಿಂದ ಮರೆಮಾಡಲಾಗಿದೆಯೋ ಅಥವಾ ಸಾಂಪ್ರದಾಯಿಕ ಲಯಕ್ಕೆ ಹೊಂದಿಕೆಯಾಗುವಂತೆ ಹೆಣೆಯಲಾಗಿದೆಯೋ ಎನ್ನುವುದು ಗೊಂದಲವಾಗಿಯೇ ಉಳಿಯುತ್ತದೆ. ಇದಲ್ಲದೆ, ಗಂಡನಿಗೆ ಬಳಸಲಾಗಿರುವ ಗೌರವಯುತ ಪದವಾದ "ಮಾಲಧಾರಿ ರಾಣೋ" ಎನ್ನುವುದು ಗುಪ್ತ ಧಿಕ್ಕಾರದ ಒಂದು ರೂಪವನ್ನು ಸೂಚಿಸುತ್ತದೆಯೇ ಎನ್ನುವುದು ಅಸ್ಪಷ್ಟವಾಗಿಯೇ ಉಳಿಯುತ್ತದೆ.
ಈ ಹಾಡು ಮಹಿಳೆಗೆ ನ್ಯಾಯವನ್ನು ಒದಗಿಸುವ ಅಥವಾ ಚಾಲ್ತಿಯಲ್ಲಿರುವ ವ್ಯವಸ್ಥೆಗಳನ್ನು ಪ್ರಶ್ನಿಸುವ ಸಾಮರ್ಥ್ಯವನ್ನು ಹೊಂದಿಲ್ಲದಿರಬಹುದು. ಆದರೆ, ಈ ಹಾಡುಗಳು ಅವಳು ಪ್ರತಿದಿನ ಎದುರಿಸುತ್ತಿರುವ ಕಠಿಣ ಸನ್ನಿವೇಶಗಳನ್ನು ಸಶಕ್ತವಾಗಿ ವ್ಯಕ್ತಪಡಿಸಲು ಅವಕಾಶವನ್ನು ಒದಗಿಸುತ್ತವೆ. ಅವಳು ಇನ್ನೊಬ್ಬರ ಬಳಿ ಹಂಚಿಕೊಳ್ಳಲು ಸಾಧ್ಯವಿಲ್ಲದ ನೋವುಗಳನ್ನು ಬಲವಾದ ಪದಗಳು ಮತ್ತು ಸ್ಪಷ್ಟ ಸಂಗೀತ ಅಭಿವ್ಯಕ್ತಿಯ ಮೂಲಕ ಹಂಚಿಕೊಳ್ಳುತ್ತಾಳೆ. ಬಹುಶಃ ಪ್ರೀತಿಯ ರಾಗದ ಸಾಂತ್ವನ ಮತ್ತು ಪರಿಚಿತತೆಯಲ್ಲಿಯೇ ಅವಳು ತನ್ನ ಅಸ್ತಿತ್ವದ ಅಸಹನೀಯ ಸತ್ಯಗಳನ್ನು ಆವರಿಸಬಲ್ಲಳು, ರಚನಾತ್ಮಕ ಸಹಾಯವನ್ನು ನೀಡಲು ಹಿಂಜರಿಯುವ ಸಮಾಜದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳಲು ಅವಳು ಇಲ್ಲಿ ಸ್ಥಳ ಕಂಡುಕೊಳ್ಳುತ್ತಾಳೆ.
કરછી
રે ગુનો જો મારે મૂ મે ખોટા વેમ ધારે,
મુંજા માલધારી રાણા મૂકે રે ગુનો જો મારે
રે ગુનો જો મારે મૂ મે ખોટા વેમ ધારે,
મુંજા માલધારી રાણા મૂકે રે ગુનો જો મારે
કડલા પૅરીયા ત છોરો આડી નજર નારે (૨),
આડી નજર નારે મૂ મેં વેમ ખોટો ધારે
મૂજો માલધારી રાણૂ મૂકે રે ગુનો જો મારે (2)
રે ગુનો જો મારે મૂ મેં ખોટા વેમ ધારે
મૂજો માલધારી રાણૂ મૂકે રે ગુનો જો મારે
બંગલી પૅરીયા ત મૂંજે હથેં સામૂં નારે (૨)
હથેં સામૂં નારે મૂ મેં વેમ ખોટો ધારે
રે ગુનો જો મારે મૂ મેં ખોટા વેમ ધારે
મૂજો માલધારી રાણૂ મૂકે રે ગુનો જો મારે
માલધારી રાણા મૂકે રે ગુનો જો મારે (2)
રે ગુનો જો મારે મૂ મેં ખોટા વેમ ધારે
મૂજો માલધારી રાણૂ મૂકે રે ગુનો જો મારે
હારલો પૅરીયા ત મૂંજે મોં કે સામૂં નારે (૨)
મોં કે સામૂં નારે મૂ મેં ખોટા વેમ ધારે,
રે ગુનો જો મારે મૂ મેં ખોટા વેમ ધારે
મૂજો માલધારી રાણૂ મૂકે રે ગુનો જો મારે (2)
રે ગુનો જો મારે મૂ મેં વેમ ખોટો ધારે,
મૂજો માલધારી રાણૂ મૂકે રે ગુનો જો મારે
નથડી પૅરીયા ત મૂંજે મોં કે સામૂં નારે (૨)
મોં કે સામૂં નારે મૂ મેં વેમ ખોટો ધારે,
મૂજા માલધારી રાણૂ મૂકે રે ગુનો જો મારે (2)
રે ગુનો જો મારે મૂ મેં વેમ ખોટો ધારે,
માલધારી રાણૂ મૂકે રે ગુનો જો મારે
ಕನ್ನಡ
ಕಾರಣವಿಲ್ಲದೆ ಹೊಡೆಯುತ್ತಾನೆ
ನನ್ನನ್ನು
ಅವನ ಮನಸಿನಲ್ಲಿ ಅನುಮಾನ ಬಿತ್ತಿಕೊಳ್ಳುತ್ತಾನೆ
ನನ್ನ ಪಶುಪಾಲಕ ಯಜಮಾನ ಹೊಡೆಯುತ್ತಾನೆ
ತಪ್ಪಿಲ್ಲದಿದ್ದರೂ
ಕಾರಣವಿಲ್ಲದೆ ಹೊಡೆಯುತ್ತಾನೆ
ನನ್ನನ್ನು
ಅವನ ಮನಸಿನಲ್ಲಿ ಅನುಮಾನ ಬಿತ್ತಿಕೊಳ್ಳುತ್ತಾನೆ.
ನನ್ನ ಪಶುಪಾಲಕ ಯಜಮಾನ ಹೊಡೆಯುತ್ತಾನೆ
ತಪ್ಪಿಲ್ಲದಿದ್ದರೂ
ನಾನು ಕಾಲ್ಗೆಜ್ಜೆ ತೊಟ್ಟರೆ
ದುರುಗುಟ್ಟಿ ನೋಡುತ್ತಾನೆ ನನ್ನತ್ತ
ಹೀಗೆ ನೋಡುತ್ತಾ ನನ್ನ,
ತನ್ನ ಮನಸಿನಲ್ಲಿ ಅನುಮಾನದ ಬೀಜ
ಬಿತ್ತಿಕೊಳ್ಳುತ್ತಾನೆ.
ಅವನು ನನ್ನ ನಂಬುವುದಿಲ್ಲ, ನನ್ನ
ಪಶುಪಾಲಕ ಯಜಮಾನ.
ಕಾರಣವಿಲ್ಲದೆ ಹೊಡೆಯುತ್ತಾನೆ.
ತನ್ನ ಮನಸಿನಲ್ಲಿ ಅನುಮಾನ ಬಿತ್ತಿಕೊಳ್ಳುತ್ತಾನೆ.
ನಾನು ಬಳೆ ತೊಟ್ಟರೆ
ದುರುಗುಟ್ಟಿ ನೋಡುತ್ತಾನೆ ನನ್ನ
ಕೈಗಳತ್ತ
ಹೀಗೆ ನೋಡುತ್ತಾ ನನ್ನ,
ತನ್ನ ಮನಸಿನಲ್ಲಿ ಅನುಮಾನದ ಬೀಜ
ಬಿತ್ತಿಕೊಳ್ಳುತ್ತಾನೆ
ಅವನು ನನ್ನ ನಂಬುವುದಿಲ್ಲ, ನನ್ನ
ಪಶುಪಾಲಕ ಯಜಮಾನ.
ಕಾರಣವಿಲ್ಲದೆ ಹೊಡೆಯುತ್ತಾನೆ
ನನ್ನನ್ನು.
ತನ್ನ ಮನಸಿನಲ್ಲಿ ಅನುಮಾನ ಬಿತ್ತಿಕೊಳ್ಳುತ್ತಾನೆ.
ನಾನು ಸರ ತೊಟ್ಟರೆ
ದುರುಗುಟ್ಟಿ ನೋಡುತ್ತಾನೆ ನನ್ನ
ಮುಖವನ್ನು
ಹೀಗೆ ನೋಡುತ್ತಾ ನನ್ನ,
ತನ್ನ ಮನಸಿನಲ್ಲಿ ಅನುಮಾನದ ಬೀಜ
ಬಿತ್ತಿಕೊಳ್ಳುತ್ತಾನೆ
ಅವನು ನನ್ನ ನಂಬುವುದಿಲ್ಲ, ನನ್ನ
ಪಶುಪಾಲಕ ಯಜಮಾನ.
ಕಾರಣವಿಲ್ಲದೆ ಹೊಡೆಯುತ್ತಾನೆ
ನನ್ನನ್ನು.
ತನ್ನ ಮನಸಿನಲ್ಲಿ ಅನುಮಾನ ಬಿತ್ತಿಕೊಳ್ಳುತ್ತಾನೆ.
ನಾನು ಮೂಗು ನತ್ತು ತೊಟ್ಟರೆ
ದುರುಗುಟ್ಟಿ ನೋಡುತ್ತಾನೆ ನನ್ನ
ಮುಖವನ್ನು
ಹೀಗೆ ನೋಡುತ್ತಾ ನನ್ನ ಮುಖವನ್ನು
ತನ್ನ ಮನಸಿನಲ್ಲಿ ಅನುಮಾನದ ಬೀಜ
ಬಿತ್ತಿಕೊಳ್ಳುತ್ತಾನೆ
ಅವನು ನನ್ನ ನಂಬುವುದಿಲ್ಲ, ನನ್ನ
ಪಶುಪಾಲಕ ಯಜಮಾನ.
ಕಾರಣವಿಲ್ಲದೆ ಹೊಡೆಯುತ್ತಾನೆ
ನನ್ನನ್ನು.
ತನ್ನ ಮನಸಿನಲ್ಲಿ ಅನುಮಾನ ಬಿತ್ತಿಕೊಳ್ಳುತ್ತಾನೆ.
ಹಾಡಿನ ಪ್ರಕಾರ : ಸಾಂಪ್ರದಾಯಿಕ ಜಾನಪದ ಹಾಡು
ವಿಭಾಗ : ಜಾಗೃತಿಯ ಹಾಡುಗಳು
ಹಾಡು : 14
ಹಾಡಿನ ಶೀರ್ಷಿಕೆ : ಮುಜೊ ಮಾಲ್ಧಾರಿ ರಾಣು ಮೂಕೆ ಜೆ ಗುನೊ ಜೋ ಮಾರೆ
ಸಂಗೀತ : ದೇವಲ್ ಮೆಹ್ತಾ
ಗಾಯಕ ರು : ಮುಂದ್ರಾ ತಾಲ್ಲೂಕಿನ ಭದ್ರೇಸರ್ ಗ್ರಾಮದ ಜುಮಾ ವಘೇರ್
ಬಳಸ ಲಾದ ವಾದ್ಯಗಳು : ಡೋಲು, ಹಾರ್ಮೋನಿಯಂ, ಬಾಂಜೊ
ರೆಕಾರ್ಡಿಂಗ್ ಮಾಡಲಾದ ವರ್ಷ : 2012, ಕೆಎಂವಿಎಸ್ ಸ್ಟುಡಿಯೋ
ಸಮುದಾಯ ಚಾಲಿತ ರೇಡಿಯೋ ಸೂರ್ವಾಣಿ ರೆಕಾರ್ಡ್ ಮಾಡಿದ 341 ಹಾಡುಗಳು ಕಚ್ ಮಹಿಳಾ ವಿಕಾಸ್ ಸಂಘಟನೆ ( ಕೆಎಂವಿಎಸ್ ) ಮೂಲಕ ಪರಿಗೆ ಬಂದಿವೆ . ಇನ್ನಷ್ಟು ಇಂತಹ ಹಾಡುಗಳಿಗಾಗಿ ಈ ಪುಟಕ್ಕೆ ಭೇಟಿ ನೀಡಿ : ರಣ್ ಪ್ರದೇಶದ ಹಾಡುಗಳು : ಕಚ್ಛೀ ಜಾನಪದ ಗೀತೆಗಳ ಸಂಗ್ರಹ
ಪ್ರೀತಿ ಸೋನಿ , ಕೆಎಂವಿಎಸ್ ಕಾರ್ಯದರ್ಶಿ ಅರುಣಾ ಧೋಲಾಕಿಯಾ , ಕೆಎಂವಿಎಸ್ ಯೋಜನಾ ಸಂಯೋಜಕ ಅಮದ್ ಸಮೇಜಾ ಮತ್ತು ಗುಜರಾತಿ ಅನುವಾದದ ಅಮೂಲ್ಯ ಸಹಾಯಕ್ಕಾಗಿ ಭಾರತಿಬೆನ್ ಗೋರ್ ಅವರಿಗೆ ವಿಶೇಷ ಧನ್ಯವಾದಗಳು .
ಅನುವಾದ: ಶಂಕರ. ಎನ್. ಕೆಂಚನೂರು